ಸಾಹಿತ್ಯ ಮತ್ತು ನಾನು

"ಅಮೇರಿಕಾ ನಾ ಕಂಡಂತೆ ಭಾಗ-2 ಪ್ರವಾಸ ಕಥನ ಮುದ್ರಣಗೊಂಡು 2021ರ ಫೆಬ್ರವರಿ 7 ರಂದು ಆನ್ ಲೈನಿನಲ್ಲಿ ಬಿಡುಗಡೆ ಯಾಗುತ್ತಿದೆ"

    ಸಾಹಿತ್ಯದ ಓದುಗನಾದ ನಾನು ಕಾಲೇಜಿನಲ್ಲಿ ಸಾಹಿತ್ಯದ ಬೋಧನೆ ಮಾಡಿದರೂ, ಸಾಮಾಜಿಕ ಚಟುವಟಿಕೆಗಳು, ಕೆಲವು ಸಂಘಟನೆಗಳಲ್ಲಿ ಅಧ್ಯಕ್ಷನಾಗಿ, ನೀರ್ದೇಶಕನಾಗಿ ಕಾರ್ಯನಿರ್ವಹಣೆ, ಸರ್ಕಾರಿ ಕೆಲಸಗಳ ಒತ್ತಡಗಳಿಂದ ಸಾಹಿತ್ಯ ರಚನೆಯ ಕಡೆ ಗಮನ ಹರಿಸಲುಸಾಧ್ಯವಾಗಿರಲಿಲ್ಲ. 2014ರಲ್ಲಿ ನಿವೃತ್ತಿಯಾದ ನಂತರ ಸಾಹಿತ್ಯವನ್ನು ‌ಹೆಚ್ಚು ಅಧ್ಯಯನ ಮಾಡಲು ತೊಡಗಿದೆ. ಮಗ ಅರುಣ್ ಅಮೇರಿಕಾದ ಸಿರಾಕ್ಯುಸ್ ವಿ.ವಿ ಯಲ್ಲಿ ಎಂ.ಎಸ್ ಪದವಿ ಮುಗಿಸಿ ಪದವಿ ಪ್ರಧಾನ ಸಮಾರಂಭಕ್ಕೆ ಬರಬೇಕೆಂದು ಆಹ್ವಾನಿಸಿದಾಗ, ನಾನು ಮತ್ತು ನನ್ನ ಶ್ರೀಮತಿ ಅಮೇರಿಕಾ ಪ್ರವಾಸ ಕೈಗೊಂಡೆವು. ಅಮೇರಿಕಾದ ಪೂರ್ವಭಾಗಗಳನ್ನು ನೋಡಿ ಬಂದ ನಂತರ, ಈ ಬಗ್ಗೆ ಏಕೆ ಬರೆಯಬಾರದು ಎಂಬ ಯೋಚನೆ ಬಂದು  ಅಮೇರಿಕಾ ನಾ ಕಂಡಂತೆ ಎಂಬ ಪ್ರವಾಸ ಕಥನ ಹೊರಬಂದಿತು. ಸ್ನೇಹಿತರಾದ ಗೋವಿಂದರಾಜು, ನನ್ನ ಶ್ರೀಮತಿ ರತ್ನ ಮತ್ತು ಮಕ್ಕಳ ಪ್ರೋತ್ಸಾಹ ಕೂಡ ಕಾರಣ. 

ನಾನಾ ಸಮಸ್ಯೆಗಳ ಕಾರಣದಿಂದ ಬರವಣಿಗೆ ಅಲ್ಲಿಯೇ ನಿಂತಿತು. ನಂತರ 2017ರಲ್ಲಿ ಅಮೇರಿಕಾದ ಫಿನಿಕ್ಸ್ನಲ್ಲಿ ಕೆಲಸ ಮಾಡುತಿದ್ದ ಮಗ ಅರುಣ್ ಮತ್ತು ಸೊಸೆ ನೋಡಲು ಅಮೇರಿಕಾಕ್ಕೆ ಹೋದೆವು. ಆ ಸಂದರ್ಭದಲ್ಲಿ ಅಮೇರಿಕಾದ ಪಶ್ಚಿಮ ಭಾಗಗಳಾದ ಕ್ಯಾಲಿಪೋರ್ನಿಯಾ, ಸ್ಯಾನ್ ಪ್ರಾನ್ಸಿಸ್ಕೊ, ಲಾಸ್ ಏಂಜಲೀಸ್, ಗ್ರಾಂಡ್ ಕೆನಿಯನ್ ಮುಂತಾದ ಭಾಗಗಳನ್ನು ನೋಡಿ ಬಂದೆವು. ಅದರ ಫಲವಾಗಿ ಅಮೇರಿಕಾ ನಾ ಕಂಡಂತೆ ಭಾಗ-2 ಪ್ರವಾಸ ಕಥನ ಮುದ್ರಣಗೊಂಡು 2021ರ ಫೆಬ್ರವರಿ 7 ರಂದು ಆನ್ ಲೈನಿನಲ್ಲಿ ಬಿಡುಗಡೆ ಯಾಗುತ್ತಿದೆ.

ಈ ಕೃತಿಯ ನಂತರ ಕಥಾಪುಂಜ ಸಣ್ಣ ಕಥೆಯನ್ನು ರಚನೆ ಮಾಡಿದ್ದು, ಮುದ್ರಣ ಕಾರ್ಯ ಆಗಬೇಕಿದೆ. ಓದುಗರ ಪ್ರೋತ್ಸಾಹ ದೊರೆತರೆ ಮತ್ತಷ್ಟು ರಚನೆ ಆಗಬಹುದು.

ಕಾಮೆಂಟ್‌ಗಳು

  1. ಅಭಿನಂದನೆಗಳು ಗೆಳೆಯ ನಾರಾಯಣ ಸ್ವಾಮಿ. ನಮ್ಮ ಗೆಳೆಯರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಈ ರೀತಿಯಲ್ಲಿ ಬರವಣಿಗೆ ಮತ್ತು ಪ್ರವಾಸ, ಅಧ್ಯಯನಗಳಲ್ಲಿ ತೊಡಗಿಕೊಂಡಿರುವುದು ನನಗಂತೂ ಖುಷಿಯ ವಿಚಾರ. ನಿನ್ನ ಅಮೇರಿಕಾ ಪ್ರವಾಸದ ಎರಡೂ ಪುಸ್ತಕಗಳನ್ನು ಕಳುಹಿಸು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಮೇರಿಕಾ ನಾ ಕಂಡಂತೆ (ಭಾಗ - 2) ಪುಸ್ತಕ ಬಿಡುಗಡೆ