ಪೋಸ್ಟ್‌ಗಳು

ಫೆಬ್ರವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಮೇರಿಕಾ ನಾ ಕಂಡಂತೆ (ಭಾಗ - 2) ಪುಸ್ತಕ ಬಿಡುಗಡೆ

ಇಮೇಜ್
ಆತ್ಮೀಯರೇ ನನ್ನ ಎರಡನೇ ಪ್ರವಾಸ ಕಥನ 'ಅಮೇರಿಕಾ ನಾ ಕಂಡಂತೆ (ಭಾಗ - 2)' ಸ್ನೇಹಿತರು ಮತ್ತು ಆತ್ಮೀಯರಾದ ಶ್ರೀ ಎಸ್ ಎಲ್ ಮುಕುಂದರಾಜು, ಶ್ರೀ ಏಚ್ ದಂಡಪ್ಪ ಹಾಗೂ ಶ್ರೀ ಗೋವಿಂದರಾಜು ಅವರ ಉಪಸ್ಥಿತಿಯಲ್ಲಿ ಬಿಡುಗಡೆಯಾಗಲಿದೆ. ನೀವೆಲ್ಲರೂ ಈ ನೇರಪ್ರಸಾರದಲ್ಲಿ ಪಾಲ್ಗೊಂಡು ನಿಮ್ಮ ಶುಭ ಸಂಧೇಶಗಳನ್ನ ಕಳುಹಿಸಿ ಎಂದು ನಿಮ್ಮಲ್ಲಿ ವಿನಂತಿ. - ನಾರಾಯಣ ಸ್ವಾಮಿ ಲೇಖಕ, 'ಆಮೇರಿಕಾ ನಾ ಕಂಡಂತೆ'

ಸಾಹಿತ್ಯ ಮತ್ತು ನಾನು

"ಅಮೇರಿಕಾ ನಾ ಕಂಡಂತೆ ಭಾಗ-2 ಪ್ರವಾಸ ಕಥನ ಮುದ್ರಣಗೊಂಡು 2021ರ ಫೆಬ್ರವರಿ 7 ರಂದು ಆನ್ ಲೈನಿನಲ್ಲಿ ಬಿಡುಗಡೆ ಯಾಗುತ್ತಿದೆ"      ಸಾಹಿತ್ಯದ ಓದುಗನಾದ ನಾನು ಕಾಲೇಜಿನಲ್ಲಿ ಸಾಹಿತ್ಯದ ಬೋಧನೆ ಮಾಡಿದರೂ, ಸಾಮಾಜಿಕ ಚಟುವಟಿಕೆಗಳು, ಕೆಲವು ಸಂಘಟನೆಗಳಲ್ಲಿ ಅಧ್ಯಕ್ಷನಾಗಿ, ನೀರ್ದೇಶಕನಾಗಿ ಕಾರ್ಯನಿರ್ವಹಣೆ, ಸರ್ಕಾರಿ ಕೆಲಸಗಳ ಒತ್ತಡಗಳಿಂದ ಸಾಹಿತ್ಯ ರಚನೆಯ ಕಡೆ ಗಮನ ಹರಿಸಲುಸಾಧ್ಯವಾಗಿರಲಿಲ್ಲ. 2014ರಲ್ಲಿ ನಿವೃತ್ತಿಯಾದ ನಂತರ ಸಾಹಿತ್ಯವನ್ನು ‌ಹೆಚ್ಚು ಅಧ್ಯಯನ ಮಾಡಲು ತೊಡಗಿದೆ. ಮಗ ಅರುಣ್ ಅಮೇರಿಕಾದ ಸಿರಾಕ್ಯುಸ್ ವಿ.ವಿ ಯಲ್ಲಿ ಎಂ.ಎಸ್ ಪದವಿ ಮುಗಿಸಿ ಪದವಿ ಪ್ರಧಾನ ಸಮಾರಂಭಕ್ಕೆ ಬರಬೇಕೆಂದು ಆಹ್ವಾನಿಸಿದಾಗ, ನಾನು ಮತ್ತು ನನ್ನ ಶ್ರೀಮತಿ ಅಮೇರಿಕಾ ಪ್ರವಾಸ ಕೈಗೊಂಡೆವು. ಅಮೇರಿಕಾದ ಪೂರ್ವಭಾಗಗಳನ್ನು ನೋಡಿ ಬಂದ ನಂತರ, ಈ ಬಗ್ಗೆ ಏಕೆ ಬರೆಯಬಾರದು ಎಂಬ ಯೋಚನೆ ಬಂದು  ಅಮೇರಿಕಾ ನಾ ಕಂಡಂತೆ ಎಂಬ ಪ್ರವಾಸ ಕಥನ ಹೊರಬಂದಿತು. ಸ್ನೇಹಿತರಾದ ಗೋವಿಂದರಾಜು, ನನ್ನ ಶ್ರೀಮತಿ ರತ್ನ ಮತ್ತು ಮಕ್ಕಳ ಪ್ರೋತ್ಸಾಹ ಕೂಡ ಕಾರಣ.  ನಾನಾ ಸಮಸ್ಯೆಗಳ ಕಾರಣದಿಂದ ಬರವಣಿಗೆ ಅಲ್ಲಿಯೇ ನಿಂತಿತು. ನಂತರ 2017ರಲ್ಲಿ ಅಮೇರಿಕಾದ ಫಿನಿಕ್ಸ್ನಲ್ಲಿ ಕೆಲಸ ಮಾಡುತಿದ್ದ ಮಗ ಅರುಣ್ ಮತ್ತು ಸೊಸೆ ನೋಡಲು ಅಮೇರಿಕಾಕ್ಕೆ ಹೋದೆವು. ಆ ಸಂದರ್ಭದಲ್ಲಿ ಅಮೇರಿಕಾದ ಪಶ್ಚಿಮ ಭಾಗಗಳಾದ ಕ್ಯಾಲಿಪೋರ್ನಿಯಾ, ಸ್ಯಾನ್ ಪ್ರಾನ್ಸಿಸ್ಕೊ, ಲಾಸ್ ಏಂಜಲೀಸ...